ಬಂಟ್ವಾಳ: ಫೆ. 26ಕ್ಕೆ ಬಂಟ್ವಾಳ ಎಸ್ಸೆಸ್ಸೆಫ್ ಕ್ಯಾಂಪಸ್ನಿಂದ ಕಾನ್ಫಿಡೆಂಟ್ಸ್ ಟೆಸ್ಟ್
ಬಂಟ್ವಾಳ, ಫೆ. 25: ಎಸ್ಸೆಸ್ಸೆಫ್ ಕ್ಯಾಂಪಸ್ ಬಂಟ್ವಾಳ ಡಿವಿಶನ್ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ಕಾನ್ಫಿಡೆಂಟ್ಸ್ ಟೆಸ್ಟ್ಫೆ. 26ರಂದು ತಾಲೂಕಿನ ವಿವಿಧೆಡೆ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟನೆ ತಿಳಿಸಿದೆ.
ಬಂಟ್ವಾಳ ಡಿವಿಶನ್ ವ್ಯಾಪ್ತಿಯ ಮಾವಿನಕಟ್ಟೆ ಸರಕಾರಿ ಶಾಲೆ, ನಾರ್ಶ, ಸುರಿಬೈಲು, ಕುಕ್ಕಾಜೆ, ದಾರುಲ್ ಇಝ್ಝ ಕೌಡೇಲು, ದಾರುಲ್ ಅಶ್ ಅರಿಯ್ಯ ಸುರಿಬೈಲು, ಸುನ್ನಿ ಮಹಲ್ ಮಂಚಿ ಸಹಿತ ಏಳು ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಕೌಂಟೆನ್ಸ್ ವಿಷಯದಲ್ಲಿ ಪರೀಕ್ಷೆಗಳು ನಡೆಯಲಿವೆ.
ಎಲ್ಲಾ ಧರ್ಮ, ಜಾತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದ್ದು ಬೆಳಗ್ಗೆ 9ರಿಂದ ಸಂಜೆ 4 ರ ತನಕ ಪರೀಕ್ಷೆ ನಡೆಯಲಿದೆ ಎಂದು ಬಂಟ್ವಾಳ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಮೌಸುಫ್ ಅಬ್ದುಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story