ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಕಾರ್ಕಳ, ಮಾ.12: ಕಾರ್ಕಳ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕರಕುಶಲ ತರಬೇತಿ ಸಂಸ್ಥೆಯು ಕನಿಷ್ಠ ಏಳನೆಯ ತರಗತಿ ಉತ್ತೀರ್ಣರಾಗಿರುವ, 17ರಿಂದ 35ರ ವಯಸ್ಸಿನೊಳಗಿನ ಅರ್ಹ ನಿರುದ್ಯೋಗಿ ಯುವಕರಿಂದ ವಿವಿಧ ಉಚಿತ ತರಬೇತಿ ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತರು ತಮ್ಮ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಭಾವಚಿತ್ರ ಇತ್ಯಾದಿ ವಿವರಗಳೊಂದಿಗೆ ಅರ್ಜಿಯನ್ನು ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಾಯೋಜಿತ, ಸಿ.ಇ.ಕಾಮತ್ ಕರಕುಶಲ ತರಬೇತಿ ಸಂಸ್ಥೆ ಮಿಯ್ಯೆರು, ಕಾರ್ಕಳ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮೊ.9481402895, (08258-298552) ಸಂಪರ್ಕಿಸಬಹುವುದು. ಕಲ್ಲು, ಮರ ಹಾಗೂ ಲೋಹ ಶಿಲ್ಪಕಲೆ(18) ಮುಂತಾದ ವಿಷಯಗಳಲ್ಲಿ ತರಬೇತಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story