ಫೆ.18: ಚುನಾವಣಾ ಪ್ರಚಾರಕ್ಕೆ ತೆರೆ
ಉಡುಪಿ, ಫೆ.11: ಉಡುಪಿ ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂಗೆ ಫೆ.20ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಚಾರವು ಮತದಾನದ ಪ್ರಾರಂಭಕ್ಕೆ 48 ಗಂಟೆಗಳ ಮುಂಚೆ ಅಂದರೆ ಫೆ.18ರ ಬೆಳಗ್ಗೆ 7ಕ್ಕೆ ಮುಕ್ತಾಯ ಗೊಳ್ಳಬೇಕಾಗಿದೆ. ಮತದಾನ ಆರಂಭಕ್ಕೆ ನಿಗದಿಪಡಿಸಿದ ಸಮಯದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷವಾಗಳಾಗಲಿ, ಅಭ್ಯರ್ಥಿಗಳಾಗಲಿ ಅಥವಾ ಅವರ ಪರವಾಗಿ ಯಾರೇ ಆಗಲಿ ಬಹಿರಂಗ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಅಲ್ಲದೇ ಈ ಅವಧಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವ ಜನಿಕ ಸಭೆ, ಸಮಾರಂಭ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವಂತಿಲ್ಲ. ಮತದಾ ರರಿಗೆ ಮೊಬೈಲ್ನಲ್ಲಿ ಎಸ್ಸೆಮ್ಮೆಸ್/ಎಮ್ಮೆಮ್ಮೆಸ್/ವಾಟ್ಸಪ್ ಇತ್ಯಾದಿ ಮೂಲಕ ಚುನಾ ವಣಾ ಪ್ರಚಾರ ಮಾಡಬಾರದು. ರೇಡಿಯೊ, ಟಿ.ವಿ. ಮೂಲಕ ಪ್ರಚಾರ ಮಾಡಬಾರದು.
Next Story