ಮಂಗಳೂರಿನಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ
ಮಂಗಳೂರು, ಎ.8: ಖ್ಯಾತ ಬಾಲಿವುಡ್ ನಟಿ, ಮಂಗಳೂರು ಮೂಲದ ಐಶ್ವರ್ಯಾ ರೈ ಅವರು ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ನಟಿಯೊಂದಿಗೆ ಪುತ್ರಿ ಆರಾಧ್ಯಾ, ತಾಯಿ ಹಾಗೂ ಕುಟುಂಬ ಸದಸ್ಯರ ಜೊತೆಗಿದ್ದಾರೆ.
ಇತ್ತೀಚೆಗೆ ಮುಂಬೈಯಲ್ಲಿ ನಿಧನರಾದ ಐಶ್ವರ್ಯಾ ರೈ ಅವರ ತಂದೆ ಕೃಷ್ಣರಾಜ್ ರೈ ಅವರ ಪಿಂಡ ಪ್ರದಾನ ಮಾಡಲೆಂದು ಅವರು ಮಂಗಳೂರಿಗೆ ಆಗಮಿಸಿದ್ದಾರೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಕುಮಾರಧಾರಾ ಸಂಗಮ ಕ್ಷೇತ್ರದಲ್ಲಿ ಅವರು ತಂದೆಯ ಪಿಂಡ ಪ್ರದಾನ ಮಾಡಲಿದ್ದಾರೆ.
Next Story