ನಾಳೆ ವಿಶ್ವ ಹೋಮಿಯೋಪತಿ ದಿನಾಚರಣೆ
ಮಂಗಳೂರು, ಎ.8: ಹೋಮಿಯೋಪತಿ ಜನಕ ಡಾ.ಸ್ಯಾಮ್ಯುಯೆಲ್ ಹನೇಮನ್ನರ 262ನೆ ಜನ್ಮ ದಿನದ ಅಂಗವಾಗಿ ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಎ.10ರಂದು ವಿಶ್ವ ಹೋಮಿಯೋಪತಿ ದಿನಾಚರಣೆಯನ್ನು ದೇರಳಕಟ್ಟೆಯಲ್ಲಿರುವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮವು ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿದ್ದು, ಕಾರ್ಯಕ್ರಮದ ಪ್ರಥಮವಾಗಿ ಎಸ್ಟೆಂಪೊರೆ ಹಾಗೂ ಇತರೆ ಸ್ಪರ್ಧೆಗಳನ್ನು ಒಳಗೊಂಡಿದೆ. ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಡಾ.ಎಂ.ಆರ್.ರವಿ, ಮಧುರೈಯ ಎಸ್.ಎಸ್.ಹನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎಸ್.ಕಾರ್ತಿಕೇಯನ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story