ಎ.15ರಂದು ಎಂ-ಪವರ್ನಿಂದ ಎಸೆಸೆಲ್ಸಿ ಮುಂದೇನು? ಕಾರ್ಯಾಗಾರ
ಮಂಗಳೂರು, ಎ.9: ಎಸೆಸೆಲ್ಸಿ ನಂತರದ ವಿದ್ಯಾಭ್ಯಾಸದ ಬಗ್ಗೆ ಅರಿವು ಮೂಡಿಸಲು, ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಹಾಗೂ ಅಭಿರುಚಿ ಇರುವಂತಹ ಕೋರ್ಸ್ಗಳನ್ನು ಆಯ್ಕೆ ಮಾಡಲು ಎಂ-ಪವರ್, ಅಸೋಸಿಯೇಶನ್ ಆಫ್ ಪೋಸ್ಟ್ ಗ್ರಾಜುಯೇಟ್ ಮುಸ್ಲಿಮ್ಸ್ ಇವರು ಎಸೆಸೆಲ್ಸಿ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಎ.15ರಂದು ಕಾರ್ಯಾಗಾರವೊಂದನ್ನು ಆಯೋಜಿಸಿದ್ದಾರೆ.
ಕಾರ್ಯಾಗಾರವು ಅಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರವರೆಗೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸೆಮಿನಾರ್ ಹಾಲ್ನಲ್ಲಿ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಎಂ-ಪವರ್ ನ ಅಸ್ಪರ್ ಹುಸೈನ್ ಮೊ.ಸಂ.: 7760508664 ಅಥವಾ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ
Next Story