ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಪ್ರಕರಣ: ಮೇ 2ರಂದು 'ಮಂಗಳೂರು ಚಲೋ'
ಮಂಗಳೂರು, ಎ.18: ಅಹ್ಮದ್ ಖುರೇಷಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಎ.28ರಂದು ಆಯೋಜಿಸಿದ್ದ ‘ಮಂಗಳೂರು ಚಲೋ’ ಕಾರ್ಯಕ್ರಮವನ್ನು ಮೇ 2ರಂದು ನಡೆಸಲಾಗುವುದು ಎಂದು ಯುನೈಟೆಡ್ ಮುಸ್ಲಿಂ ಫ್ರಂಟ್ನ ಸಂಚಾಲಕ ಕೆ.ಅಶ್ರಫ್ ತಿಳಿಸಿದ್ದಾರೆ.
ಎ.28ರಂದು ನೆಹರೂ ಮೈದಾನದಲ್ಲಿ ಬೇರೆ ಕಾರ್ಯಕ್ರಮವಿದೆ. ಹಾಗಾಗಿ ಅಂದು ನೆಹರೂ ಮೈದಾನದಲ್ಲಿ ಮಂಗಳೂರು ಚಲೋ ಕಾರ್ಯಕ್ರಮ ನಡೆಸಲು ಆಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಮೇ 2ರಂದು ಮಂಗಳೂರು ಚಲೋ ನಡೆಸಲಾಗುವುದು ಎಂದು ಅಶ್ರಫ್ ಹೇಳಿದ್ದಾರೆ.
Next Story