ಬಾಲಕಿಯ ಅಪಹರಣ: ಆರೋಪ
ಮಂಗಳೂರು, ಮೇ 11: ವಿವಾಹಿತನೋರ್ವ 14 ವರ್ಷದ ಬಾಲಕಿಯನ್ನು ಅಪಹರಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಮಾಲೆಮಾರ್ನ 14 ವರ್ಷ ಪ್ರಾಯದ ಬಾಲಕಿಯನ್ನು ಮಹೇಶ್ ಯಾನೆ ಮಲಿಕ್ ಕರೆದೊಯ್ದಿರುವುದಾಗಿ ಆರೋಪಿಸಲಾಗಿದೆ. ಅಪಹೃತ ಬಾಲಕಿಯ ಕುಟುಂಬದವರು ಹಾಗೂ ಆರೋಪಿ ಇಬ್ಬರೂ ರಾಯಚೂರು ಮೂಲದವರು. ಕೂಲಿ ಕೆಲಸಕ್ಕಾಗಿ ಮಾಲೆಮಾರ್ನಲ್ಲಿ ಬಂದು ಬಾಡಿಗೆ ನೆಲೆಸಿದವರು.
ಬಾಲಕಿ 8ನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಬುಧವಾರ ಮಧ್ಯಾಹ್ನ ಆಕೆ ಅಂಗಡಿಗೆ ಹೋಗಿದ್ದು, ವಾಪಸ್ ಮನೆಗೆ ಬಂದಿಲ್ಲ.
ಈ ಬಗ್ಗೆ ಆಸುಪಾಸಿನಲ್ಲಿ ವಿಚಾರಿಸಿದಾಗ ಆಕೆ ಮಹೇಶ್ ಯಾನೆ ಮಲಿಕ್ ಜತೆ ಇರುವುದನ್ನು ಕಂಡಿರುವ ಬಗ್ಗೆ ತಿಳಿಸಿದ್ದಾರೆ. ಹಾಗಾಗಿ ಆಕೆಯನ್ನು ಆತ ಅಪಹರಿಸಿರಬೇಕೆಂದು ಶಂಕಿಸಲಾಗಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
Next Story