ಮಲಬಾರ್ ಗೋಲ್ಡ್ನಲ್ಲಿ ತಾಯಂದಿರ ದಿನಾಚರಣೆ
ಉಡುಪಿ, ಮೇ 15: ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ತಾಯಂದಿರ ದಿನವನ್ನು ಸೋಮವಾರ ಉಡುಪಿಯ ಶೋರೂಂ ನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುನೀತಾ ಬಿ.ಶೆಟ್ಟಿ, ಸುಜಾತ ನಾಕ್, ಅನುಪಮಾ ಐತಾಳ್, ಶ್ವೇತಾ ನಾಯಕ್, ಆಶಾ ಜಿ.ಮಲ್ಯ, ಜಯಶ್ರೀ, ನಸೀಮ್ ಎಸ್. ಖಾಝಿ, ಸವಿತಾ ನಾಯಕ್, ಸಫಿಯಾ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದರು.
ತಾಯಂದಿರ ದಿನಾಚರಣೆಯ ಪ್ರಯುಕ್ತ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನಲ್ಲಿ ಹಗುರವಾದ ಆಕರ್ಷಕ ವಜ್ರಾಭರಣಗಳು 5,000 ರೂ. ನಿಂದ ಆರಂಭಗೊಂಡು ಕೈಗೆಟಕುವ ದರದಲ್ಲಿ ಲಭ್ಯವಿದೆ.
ಪ್ರತಿದಿನ ಧರಿಸುವ ಬಳೆಗಳು, ಸ್ಟಡ್, ಉಂಗುರ, ಪೆಂಡೆಂಟ್ಗಳು ಅನನ್ಯ ಡಿಸೈನ್ಗಳಲ್ಲಿ ದೊರೆಯುತ್ತದೆ ಎಂದು ಉಡುಪಿ ಮಳಿಗೆ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ.
Next Story