ಸಮಗ್ರ ಶಿಶು ಶಿಕ್ಷಣ ತರಬೇತಿ ಶಿಬಿರ
ಹೆಬ್ರಿ, ಮೇ 21: ಹಿಂದು ಸೇವಾ ಪ್ರತಿಷ್ಠಾನದ ಶಿಶು ಶಿಕ್ಷಣ ಸಂಶೋಧನಾ ವಿಭಾಗ ಬೆಂಗಳೂರು ಇದರ ವತಿಯಿಂದ ಸಮಗ್ರ ಶಿಶು ಶಿಕ್ಷಣ ತರಬೇತಿ ಶಿಬಿರ ಇತ್ತೀಚೆಗೆ ಹೆಬ್ರಿ ಅಮೃತಭಾರತಿ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ.ಭಾರ್ಗವಿ ಆರ್. ಐತಾಳ್ ಉದ್ಘಾಟಿಸಿದರು.
ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಹಿಂದು ಸೇವಾ ಪ್ರತಿಷ್ಟಾನದ ಸುರೇಶ್ ಉಪಸ್ಥಿತರಿದ್ದರು. ರಾಜ್ಯದ ವಿವಿದೆಡೆಯ 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
Next Story