ಅಜೀಂ ಪ್ರೇಮಜೀ ಫೌಂಡೇಶನ್ಉದ್ಯೋಗಕ್ಕಾಗಿ ಅರ್ಜಿ
ಮೈಸೂರು, ಮೇ 22: ಅಜೀಂ ಪ್ರೇಮಜೀ ಫೌಂಡೇಶನ್ನ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಉದ್ಯೋಗಗಳಿಗೆ ಸ್ನಾತಕೋತ್ತರ ಪದವೀಧರರು, ಇಂಜಿನಿಯರ್ಗಳು, ಡಾಕ್ಟರೇಟ್ ಮತ್ತು ಎಂಫಿಲ್ ಪಧವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಜೀಂ ಪ್ರೇಮಜೀ ಫೌಂಡೇಶನ್ನಲ್ಲಿ ಸುಮಾರು 250 ಜನರಿಗೆ ಉದ್ಯೋಗವಕಾಶವಿದೆ. ಸ್ನಾತಕೊತ್ತರ, ಇಂಜಿನಿಯರಿಂಗ್(ಬಿಇ,ಬಿಟೆಕ್/ಎಂಟೆಕ್) ಡಾಕ್ಟರೇಟ್ ಮತ್ತು ಎಂಫಿಲ್ ಪದವೀಧರರಿಗೆ ಅಸೋಸಿಯೇಟ್ಗಳಾಗಿ ಸೇರ್ಪಡೆಯಾಗುವ ಅವಕಾಶವಿದ್ದು, ಇದು ಪೂರ್ಣಾವಧಿ ಉದ್ಯೋಗವಾಗಿ ಪರಿವರ್ತನೆಯಾಗುವ ಅವಕಾಶವಿದೆ. ಸ್ನಾತಕೋತ್ತರ ಅಧ್ಯಯನವನ್ನು ಈಗಾಗಲೇ ಪೂರ್ಣಗೊಳಿಸಿದವರು ಅಥವಾ 2017ರಲ್ಲಿ ಪೂರ್ಣಗೊಳಿಸಲಿರುವವರು ಮೇ 26ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
www.azimpremjifoundation.org/campus ಕರ್ನಾಟಕ, ಛತ್ತಿಸಗಡ, ಪುದುಚೇರಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಸಿದ್ಧವಿರಬೇಕು. ಮಾಹಿತಿಗೆ ಜಾಲತಾಣವನ್ನು ನೋಡಬಹುದು ಎಂದು ಪ್ರಕಟನೆ ತಿಳಿಸಿದೆ.
Next Story