ತೆರಿಗೆ ವಂಚಿಸಿ ಕೋಳಿ ಸಾಗಾಟ: ಲಾರಿ ವಶ
ಮಂಜೇಶ್ವರ, ಮೇ 22: ತೆರಿಗೆ ಪಾವತಿಸದೆ ಕೋಳಿ ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ.
ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಸಾಗುತ್ತಿದ್ದ ಕೇರಳ ನೋಂದಾವಣೆಯ ಲಾರಿಯನ್ನು ಸೋಮವಾರ ಮುಂಜಾನೆ 3 ಗಂಟೆಗೆ ಮಂಜೇಶ್ವರ ಎಎಸ್ಐ ಜೋಸ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ.
ಮೀಯಪದವು- ಚಿಗುರುಪಾದೆ ಮಧ್ಯೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕೋಳಿ ಲಾರಿ ಆಗಮಿಸಿದೆ. ಕಾರ್ಯಾಚರಣೆ ವೇಳೆ ಲಾರಿ ಚಾಲಕ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುಮಾರು 1,300 ಕೋಳಿಗಳನ್ನು ತುಂಬಿಸಲಾಗಿತ್ತು. ಲಾರಿ ಹಾಗೂ ಕೋಳಿಯನ್ನು ಮಾರಾಟ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story