ಅಲ್ ಮದೀನ ದಅವಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಬಿ.ಸಿ.ರೋಡ್,ಮೇ 25: ರಾಜ್ಯ ಎಸ್ಸೆಸ್ಸೆಫ್ ವತಿಯಿಂದ ಇತ್ತೀಚೆಗೆ ನಡೆದ ದಅವಾ ಕಾನ್ಫರೆನ್ಸ್ ಅಂಗವಾಗಿ ದರ್ಸ್ ಮತ್ತು ದಅವಾ ಕಾಲೇಜುಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಕೈ ಬರಹ ಮ್ಯಾಗಝಿನ್ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಮಂಜನಾಡಿ ಅಲ್ ಮದೀನ ದಅವಾ ವಿದ್ಯಾರ್ಥಿಗಳು ಪ್ರಥಮ ಸ್ಥಾನಿಯಾಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ವಿದ್ವತ್ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಕಲಿಯುವ ಮುಹಮ್ಮದ್ ಇಫಾಝ್ ತಮೀಂ ಕಾನೆಕೆರೆ ಪ್ರಥಮ ಸ್ಥಾನ ಪಡೆದರೆ, ಕೈ ಬರಹ ಮ್ಯಾಗಝಿನ್ ವಿನ್ಯಾಸದಲ್ಲಿ ಅಬ್ದುರ್ರಹ್ಮಾನ್ ವಳಾಲ್ ನೇತೃತ್ವದ ತಂಡವು ಪ್ರಥಮ ಸ್ಥಾನ ಸಂಪಾದಿಸಿದ್ದಾರೆ. ವಿಜೇತರಿಗೆ ಇತ್ತೀಚೆಗೆ ಬಿ.ಸಿ.ರೋಡ್ ಬಂಟರ ಭವದಲ್ಲಿ ನಡೆದ ಬೃಹತ್ ಮುತಲ್ಲಿಂ ಸಮಾವೇಶದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗಾಗಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಅಭಿನಂದಿಸಿದೆ.
Next Story