ಮೌಂಟ್ ಕಾರ್ಮೆಲ್ ಸ್ಕೂಲ್ಗೆ ಶೇ.100 ಫಲಿತಾಂಶ
ಸಿಬಿಎಸ್ಇ ಫಲಿತಾಂಶ
ಮಂಗಳೂರು, ಮೇ 28: ಮಾರ್ಚ್-ಎಪ್ರಿಲ್ನಲ್ಲಿ ನಡೆದ ಸಿಬಿಎಸ್ಇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಮೇರಿಹಿಲ್ನಲ್ಲಿರುವ ಮೌಂಟ್ ಕಾರ್ಮೆಲ್ ಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಆ ಪೈಕಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಪೈಕಿ ಅಶ್ವಿನ್ ಅಶೋಕನ್ ವನ್ನರಾತ್ ಮತ್ತು ಫ್ರೆಝಿಲ್ಲೆ ಡಿಸೋಜ ತಲಾ 480 ಅಂಕದೊಂದಿಗೆ ಶೇ.96 ಫಲಿತಾಂಶ ದಾಖಲಿಸಿದ್ದಾರೆ.
ಉಳಿದಂತೆ ಚಿನ್ಮಯ ಎಚ್.ಎನ್. (ಶೇ.94.80), ಹರ್ಷ ಡಿಸೋಜ (ಶೇ.94.60), ಮೇಘನಾ ಡಿಸೋಜ (92.80), ರೆಬೆಕ್ಕಾ ಅಲ್ಬುಕರ್ಕ್ (ಶೇ.91.40), ಮುಹಮ್ಮದ್ ಹರ್ಷಾಕ್ (ಶೇ. 90.60), ಕ್ರಿಸ್ ಮಿರಂದಾ (ಶೇ.90.40) ಅಂಕ ದಾಖಲಿಸಿದ್ದಾರೆ.
Next Story