500ರೊಳಗಿನ ರ್ಯಾಂಕ್ನಲ್ಲಿ ವಿಕಾಸ್ ಪಿಯು ಕಾಲೇಜಿನ 13 ಮಂದಿ
ಮಂಗಳೂರು, ಮೇ 30: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಮಂಗಳೂರಿನ ಮೇರಿಹಿಲ್ನಲ್ಲಿರುವ ವಿಕಾಸ್ ಪಿಯು ಕಾಲೇಜಿನ 13 ಮಂದಿ ವಿದ್ಯಾರ್ಥಿಗಳು 500ರೊಳಗಿನ ರ್ಯಾಂಕ್ಗಳನ್ನು ಪಡೆದಿದ್ದಾರೆ. ಉಳಿದಂತೆ 1000ದೊಳಗಿನ ರ್ಯಾಂಕ್ ಪಡೆದವರಲ್ಲಿ ಕಾಲೇಜಿನ 22 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಕಾಲೇಜಿನ 320 ವಿದ್ಯಾರ್ಥಿಗಳು ಹಾಜರಾಗಿದ್ದರು. ಅಲ್ಲದೆ ಕಾಲೇಜಿನ 4 ವಿದ್ಯಾರ್ಥಿಗಳು ಕೆವಿಪಿವೈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, 60 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಬಿಎಸ್ಸಿ(ಕೃಷಿ) ವಿಭಾಗದಲ್ಲಿ ಐಶ್ವರ್ಯಾ ಬನ್ನದಭಾವಿ 431ನೆ ರ್ಯಾಂಕ್ ಗಳಿಸಿದ್ದರೆ, ಶಾಲಿನಿ ಬಿಎಂ 452ನೆ ರ್ಯಾಂಕ್ ಪಡೆದಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ ಶ್ರೇಯನ್ಸ್ ವೈ. 249, ಸಂತೋಷ್ ಕುಂಬಾರ್ 251, ರಘುನಂದನ್ 259, ಹಂಸಿನಿ 332, ಶಾಲಿನಿ ಬಿ.ಎಂ. 365, ಐಶ್ವರ್ಯಾ ಬಿ. 410, ಶ್ರಾಫ್ ಪ್ರಜ್ವಲ್ 596ನೆ ರ್ಯಾಂಕ್ ಪಡೆದಿದ್ದಾರೆ.
ಐಎಸ್ಎಂಎಚ್ ವಿಭಾಗದಲ್ಲಿ ಐಶ್ವರ್ಯಾ ಬನ್ನದಭಾವಿ 331, ಶಾಲಿನಿ ಬಿ.ಎಂ. 341, ರಘುನಂದನ್ 416, ಶ್ರೇಯನ್ಸ್ ವೈ. 534, ಸಂತೋಷ್ ಕುಂಬಾರ್ 616, ಅರ್ಜುನ್ ಚಾತ್ರಾ 634 ರ್ಯಾಂಕ್ ಪಡೆದಿದ್ದಾರೆ. ಬಿ ಫಾರ್ಮಾ ವಿಭಾಗದಲ್ಲಿ ಸಂಷೋಷ್ ಕುಂಬಾರ್ 901, ಶ್ರೇಯನ್ಸ್ 902 ರ್ಯಾಂಕ್ ಹಾಗೂ ಪ್ರಾಕ್ಟಿಕಲ್ ಬಿಎಸ್ಸಿಯಲ್ಲಿ ಶ್ರಾವ್ಯಾ ಕೆ.ಜೆ. 340 ಹಾಗೂ ಸಚಿನ್ 620ನೆ ರ್ಯಾಂಕ್ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.