ಅರಫಾ ಕಾಲೇಜಿನ ಕ್ರೀಡಾಕೂಟ
ಉಪ್ಪಿನಂಗಡಿ, ಜ.4: ಅರಫಾ ಪಿಯು ಕಾಲೇಜಿನ ಪೋಷಕರ, ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ನೌಶಾದ್ ಕ್ರೀಡಾಕೂಟವನ್ನು ಗಿಡನೆಡುವ ಮೂಲಕ ಉದ್ಘಾಟಿಸಿದರು. ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅರಫಾ ವಿದ್ಯಾಕೇಂದ್ರ ಸಮೂಹ ಸಂಸ್ಥೆಯ ನಿರ್ದೇಶಕ ನಝೀರ್ ಮಠ, ಅಧ್ಯಕ್ಷ ಕೆ.ಪಿ. ಸಿದ್ದೀಕ್, ಆಡಳಿತ ನಿರ್ದೇಶಕ ಶಫೀಕ್ ಕೆ.ಪಿ., ಹಾಜಿ ಇಸ್ಮಾಯೀಲ್ ಮಠ, ಆಶಿಕ್ ಕೆ.ಪಿ., ಅರಫಾ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕಿ ಫಾತಿಮತ್ ಅಫ್ರೀನಾ, ಅರಫಾ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಎಸ್, ಶಿಕ್ಷಕಿ ಜಯಲಕ್ಷ್ಮೀ, ಉಪಸ್ಥಿತರಿದ್ದರು.
ಶಿಕ್ಷಕಿ ಸರೀನಾ ಮತ್ತು ಗಿರೀಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು
Next Story