ಉಡುಪಿ: ಮಲಬಾರ್ ಗೋಲ್ಡ್ನಿಂದ ವಿಶ್ವ ಪರಿಸರ ದಿನಾಚರಣೆ
ಉಡುಪಿ, ಜೂ. 5: ವಿಶ್ವ ಪರಿಸರ ದಿನದ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಗಿಡ ವಿತರಣೆ ಮತ್ತು ನೆಡುವ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ವಿಶಿಷ್ಟವಾಗಿ ಆಚರಿಸಲಾದ ಈ ಕಾರ್ಯಕ್ರಮಕ್ಕೆ ಗೋಪಾಲಪುರದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಪಾಲಪುರ ನಗರಸಭೆ ಸದಸ್ಯ ಚಂದ್ರಕಾಂತ್ ನಾಯಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ವಿವಿಧ ಕಡೆಗಳಲ್ಲಿ ಸುಮಾರು 600 ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
400 ವಿವಿಧ ಜಾತಿಯ ಗಿಡಗಳನ್ನು ಉಡುಪಿ ನಗರದ ಶಾಲಾ ಕಾಲೇಜು, ಪೊಲೀಸ್ ಠಾಣೆ ಆವರಣ, ಮಣಿಪಾಲದ ಮಣ್ಣಪಳ್ಳ, ಉದ್ಯಾನವನಗಳಲ್ಲಿ ನೆಡಲಾಗುವುದು ಎಂದು ಉಡುಪಿ ಸ್ಟೋರ್ ಹೆಡ್ ಹಫೀಝ್ ರಹ್ಮಾನ್ ತಿಳಿಸಿದರು.
Next Story