ಸಿಬಿಎಸ್ಇ: ಮಾಧವ ಕೃಪಾಗೆ ಶೇ.100 ಫಲಿತಾಂಶ
ಮಣಿಪಾಲ, ಜೂ.5: ಈ ಬಾರಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಈ ಬಾರಿ 114 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆ ಗೊಂಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಉತ್ತೀರ್ಣಗೊಂಡ ವಿದ್ಯಾರ್ಥಿಗಳಲ್ಲಿ 23 ಮಂದಿ 10ಸಿಜಿಪಿಎ ಅಂಕಗಳಿಸಿದ್ದರೆ, 46 ಮಂದಿ ಎ1 ಹಾಗೂ 33 ಮಂದಿ ಎ2 ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story