ಮರಕಡ: ಜುಮಾ ಮಸೀದಿಯಲ್ಲಿ ಪರಿಸರ ದಿನಾಚರಣೆ
ಮರಕಡ, ಜೂ. 5: ಸಿದ್ದೀಕ್ ಜುಮಾ ಮಸೀದಿ ಮರಕಡ ಕುಂಜತ್ತಬೈಲ್ನಲ್ಲಿ ‘ನಾಳೆಗೊಂದು ನೆರಳು’ ಕಾರ್ಯಕ್ರಮದ ಅಂಗವಾಗಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮಸೀದಿಯ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಮಿಟಿ ಅಧ್ಯಕ್ಷ ನಝೀರ್ ಖಾಸಿಂ, ಇಬ್ರಾಹೀಂ ಸಿ., ತಾಜುದ್ದೀನ್ ಮಿಸ್ಬಾಹಿ, ಹಮೀದ್ ಕುಲ, ರಹ್ಮಾನ್ ಖಾನ್ ಕುಂಜತ್ತಬೈಲ್ ಮತ್ತಿತರರು ಉಪಸ್ಥಿತರಿದ್ದರು.
Next Story