ಹಜ್ ಯಾತ್ರೆಯ ಅಂತಿಮ ಕಂತು ಪಾವತಿಯ ಅವಧಿ ವಿಸ್ತರಣೆ
ಮಂಗಳೂರು, ಜೂ.20: ಪವಿತ್ರ ಹಜ್ ಯಾತ್ರೆಯ ಅಂತಿಮ ಕಂತು ಪಾವತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಅಂತಿಮ ಕಂತು ಪಾವತಿಗೆ ಜೂ.19 ಕೊನೆಯ ದಿನ ಎಂದು ಈ ಹಿಂದೆ ಸೂಚಿಸಲಾಗಿತ್ತು. ಆದರೆ ಪವಿತ್ರ ರಮಝಾನ್ ಹಿನ್ನೆಲೆಯಲ್ಲಿ ನಿಗದಿತ ದಿನದೊಳಗೆ ಪಾವತಿಸಲಾಗದೆ ಹಲವರು ತೊಂದರೆಗೊಳಗಾಗಿದ್ದರು. ಇದನ್ನು ಮನಗಂಡ ಕೇಂದ್ರ ಹಜ್ ಕಮಿಟಿಯು ಅಂತಿಮ ಕಂತಿನ ಹಣವನ್ನು ಜುಲೈ 10ರೊಳಗೆ ಪಾವತಿಸುವಂತೆ ಸೂಚನೆ ಹೊರಡಿಸಿದೆ ಎಂದು ಮಂಗಳೂರು ಹಜ್ ಸಮಿತಿಯ ಅಧ್ಯಕ್ಷ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
Next Story