ಗ್ರಾ.ಪಂ.ಚುನಾವಣೆ : ಬಂಟ್ವಾಳ ,ಬೆಳ್ತಂಗಡಿ ಗ್ರಾ.ಪಂ.ಗಳಲ್ಲಿ ಶೇ. 76.68 ಮತದಾನ
ಮಂಗಳೂರು, ಜು.2: ಬಂಟ್ವಾಳ ತಾಲೂಕಿನ ಕರೋಪಾಡಿ ಹಾಗೂ ಬೆಳ್ತಂಗಡಿ ತಾಲೂಕಿನ ಬಳಂಜ, ಬಳಂಜ ಮತ್ತು ಮೇಲಂತಬೆಟ್ಟು ಗ್ರಾಮ ಪಂಚಾಯತ್ಗಳಿಗೆ ಇಂದು ಮತದಾನ ನಡೆದಿದ್ದು, ಶೇ. 76.68 ಮತದಾನ ದಾಖಲಾಗಿದೆ.
ಕರೋಪಾಡಿ ಗ್ರಾ.ಪಂ.ನಲ್ಲಿ ಒಟ್ಟು 979 ಮತದಾರರಿದ್ದು, 400 ಪುರುಷರು ಹಾಗೂ 390 ಮಹಿಳೆಯವರು ಮತದಾನ ಮಾಡುವ 790 ಮಂದಿ ಹಕ್ಕು ಚಲಾಯಿಸುವ ಮೂಲಕ ಶೇ. 80.69 ಮತದಾನವಾಗಿದೆ.
ಬಳಂಜ ಗ್ರಾ.ಪಂ.ನಲ್ಲಿ ಒಟ್ಟು 630 ಮಂದಿ ಮತದಾರರಿದ್ದಾರೆ. ಈ ಪೈಕಿ 226 ಪರುಷರು ಹಾಗೂ 222 ಮಹಿಳೆಯರ ಸಹಿತ 448 ಮಂದಿ ಮತಚಲಾಯಿಸುವ ಮೂಲಕ ಶೇ. 71.11 ಮತದಾನವಾದಂತಾಗಿದೆ.
ಬಳಂಜ ಗ್ರಾ.ಪಂ.ನಲ್ಲಿ ಒಟ್ಟು 615 ಮತದಾರರಲ್ಲಿ 239 ಪುರುಷರು ಹಾಗೂ 225 ಮಹಿಳೆಯರು 464 ಮಂದಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ. 75.45 ಮತದಾನವಾಗಿದೆ.
ಮೇಲಂತಬೆಟ್ಟು ಗ್ರಾ.ಪಂ.ನಲ್ಲಿ 817 ಮಂದಿ ಮತದಾರರಿದ್ದು, ಇವರಲ್ಲಿ 318 ಪುರುಷರು ಹಾಗೂ 312 ಮಹಿಳೆಯರ ಸಹಿತ 630ಮಂದಿ ಮತದಾನ ಮಾಡಿದ್ದಾರೆ. ಈ ಮೂಲಕ ಮೇಲಂತಬೆಟ್ಟುನಲ್ಲಿ ಶೇ. 77.11 ಮತದಾನವಾಗಿದೆ. ಈ ನಾಲ್ಕೂ ಗ್ರಾ.ಪಂ. ಕ್ಷೇತ್ರಗಳಲ್ಲಿ 3041 ಮತದಾರರಲ್ಲಿ 1183 ಪುರುಷರು ಹಾಗೂ 1149 ಮಹಿಳೆಯವರ ಸಹಿತ ಒಟ್ಟು 2332 ಮಂದಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ. 76.68 ಮತ ಚಲಾವಣೆಯಾಗಿವೆ.