ನಂದಿಗುಡ್ಡೆ ಸ್ಮಶಾನದಲ್ಲಿ ಮೂಲಭೂತ ವ್ಯವಸ್ಥೆ : ಶಾಸಕ ಲೋಬೊ ಸೂಚನೆ
ಮಂಗಳೂರು, ಜು.12: ನಂದಿಗುಡ್ಡೆ ಸ್ಮಶಾನದಲ್ಲಿ ಎಲ್ಲ ರೀತಿಯ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸುವಂತೆ ಶಾಸಕ ಜೆ.ಆರ್.ಲೋಬೊ ಸೂಚಿಸಿದರು.
ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಂದಿಗುಡೆ ಸ್ಮಶಾನ ಸಮಿತಿಯ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಿದರು. ನಂದಿಗುಡ್ಡೆ ಸ್ಮಶಾನದಲ್ಲಿ ಜನರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು. ಬೆಂಚ್ಗಳನ್ನು ಒದಗಿಸಿ ಜನರು ಕುಳಿತು ಕೊಳ್ಳಲು ಅವಕಾಶ ಕಲ್ಪಿಸುವಂತೆ ತಿಳಿಸಿದರಲ್ಲದೆ, ರಾತ್ರಿ ಹೊತ್ತು ಸ್ಮಶಾನಕ್ಕೆ ಬಂದರೆ ಅನುಕೂಲವಾಗುವಂತೆ ಜನರೇಟರ್ ವ್ಯವಸ್ಥೆ ಒದಗಿಸುವಂತೆಯೂ ಸೂಚಿಸಿದರು.
ಸ್ಮಶಾನದ ಪರಿಸರದಲ್ಲಿ ಒಳಗೆ ಮತ್ತು ಹೊರಗೆ ಸುಂದರೀಕರಣ ಮಾಡಬೇಕು, ಸ್ಮಶಾನಕ್ಕೆ ತರುವ ಹೂವು ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಾಗಿಸಲು ಕ್ರಮ ಕೈಗೊಳ್ಳುವಂತೆ ಹಾಗು ಈ ಪರಿಸರದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರ ವ್ಯವಸ್ಥೆಗೆ ತೊಂದರೆಯುಂಟು ಮಾಡದಂತೆ ಸೂಚಿಸಿದರು.
Next Story