ಆಸ್ಟಿನ್ ಮೊಂತೇರೋಗೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು, ಜು. 12: ಉಳ್ಳಾಲದ ಉಳಿಯ ನಿವಾಸಿ ಟೆಂಪೊ ಚಾಲಕ ಆಸ್ಟಿನ್ ಮೊಂತೆರೋ ಅವರಿಗೆ ಚೂರಿಯಿಂದ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಲಾಲ್, ಜಾಫರ್, ಇರ್ಫಾನ್ ಮತ್ತು ಜುನೈದ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಟೆಂಪೊದಲ್ಲಿ ಮಣ್ಣು ಲೋಡ್ ಮಾಡಿ ಉಳ್ಳಾಲ ಪೇಟೆ ಕಡೆಗೆ ಬರುತ್ತಿದ್ದ ಆಸ್ಟಿನ್ರನ್ನು ಆಝಾದ್ನಗರ ಬಳಿ ತಂಡವೊಂದು ಹಲ್ಲೆ ನಡೆಸಿ ಚೂರಿಯಿಂದ ಇರಿದಿತ್ತು ಎಂದು ಆರೋಪಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story