ಹಜ್ ಯಾತ್ರೆ: ಜು.24ರಂದು ಬಜ್ಪೆಯಲ್ಲಿ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ
ಮಂಗಳೂರು, ಜು.21: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗಾಗಿ ಜು.24, 25, 26ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಹಜ್ ವಿಮಾನಗಳು ನೇರವಾಗಿ ಮದೀನಾ ತಲುಪಲಿದೆ.
ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಜು.24ರಂದು ಪೂರ್ವಾಹ್ನ 11 ಗಂಟೆಗೆ ಬಜ್ಪೆ ಅನ್ಸಾರ್ ಶಾಲೆಯಲ್ಲಿ ನಡೆಯಲಿದೆ. ಹಜ್ ಸಚಿವ ಆರ್.ರೋಷನ್ ಬೇಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖಾಝಿಗಳು ಜಿಲ್ಲೆಯ ಜನಪ್ರತಿನಿಧಿಗಳು, ಸಮಾಜ ಪ್ರಮುಖರು ಭಾಗವಹಿಸಲಿದ್ದಾರೆ.
ಜು.24ರಂದು ಸಂಜೆ 4:15ಕ್ಕೆ, ಉಳಿದೆರಡು ದಿನ ಅಪರಾಹ್ನ 12:45 ಮತ್ತು ಸಂಜೆ 4:15ಕ್ಕೆ ವಿಮಾನವು ಹೊರಡಲಿದೆ. ಯಾತ್ರಾರ್ಥಿಗಳು ನಿಗದಿತ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿ ಬಜ್ಪೆಯಲ್ಲಿರುವ ಹಳೆ ವಿಮಾನ ನಿಲ್ದಾಣದಲ್ಲಿ ತಮ್ಮ ಲಗ್ಗೇಜು, ಕನ್ಫರ್ಮೇಶನ್ ಲೆಟರ್ ಹಾಗೂ ಹಣ ಪಾವತಿ ರಶೀದಿಯೊಂದಿಗೆ ನೋಂದಾಯಿಸುವಂತೆ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಖ್ ಪ್ರಕಟನೆಯಲ್ಲಿ ಕೋರಿದ್ದಾರೆ.
Next Story