ಮೀನುಗಾರಿಕಾ ದೋಣಿಗಳಿಗೆ ಸಬ್ಸಿಡಿ: ಆಧಾರ್ ನೀಡಲು ಸೂಚನೆ
ಮಂಗಳೂರು, ಜು.21: ಮೀನುಗಾರಿಕೆ ಯಾಂತ್ರಿಕ ದೋಣಿಗಳಿಗೆ ಡೀಸೆಲ್ ಮೇಲಿನ ರಾಜ್ಯ ಮಾರಾಟ ಕರ ಸಹಾಯಧನವನ್ನು ನೇರವಾಗಿ ದೋಣಿ ಮಾಲಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆಯಲ್ಲಿ ಎಲ್ಲ ಯಾಂತ್ರಿಕೃತ ದೋಣಿಗಳ ಮಾಲಕರು ಡೀಸೆಲ್ ಸಹಾಯಧನ ಪಡೆಯುವ ಸಂಬಂಧ ಆ.31ರೊಳಗೆ ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕು.
ಇದಕ್ಕೆ ತಪ್ಪಿದಲ್ಲಿ ದೋಣಿಗೆ ನೀಡಲಾಗುವ ಡೀಸೆಲ್ ಮೇಲಿನ ರಾಜ್ಯ ಮಾರಾಟಕರ ಸಹಾಯಧನವನ್ನು ತಡೆ ಹಿಡಿಯಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
Next Story