ಉಚಿತ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಜು.21: ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯು 30 ದಿನಗಳ ವಿದ್ಯುತ್ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ಸೆಟ್ ನಿರ್ವಹಣೆ ಉಚಿತ ತರಬೇತಿಯನ್ನು ಆ.12ರಿಂದ ಸೆ.10ರವರೆಗೆ ಆಯೋಜಿಸಿದೆ.
ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ 18ರಿಂದ 45 ವರ್ಷ ವಯೋಮಿತಿಯೊಳಗಿರುವ, ಸ್ವ ಉದ್ಯೋಗ ಮಾಡಲು ಉತ್ಕಟ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಸಂಬಂಧ ಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾದ ಬಗ್ಗೆ ಮಾಹಿತಿ ನೀಡಲಾಗುವುದು.
ಆಸಕ್ತರು ಕೂಡಲೇ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ನಿರ್ದೇಶಕರು, ರುಡ್ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-576 213 ಉಡುಪಿ ಜಿಲ್ಲೆ ಈ ವಿಳಾಸಕ್ಕೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂ.ಸಂ.: 0820-2563455, 9449862808 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story