ಎರ್ಮಾಳು ಬಡಾ ಸಮುದ್ರ ತೀರದಲ್ಲಿ ಕಡಲ್ಕೊರೆತ
ಎರ್ಮಾಳು,ಆ.02: ಎರ್ಮಾಳು ಬಡಾ ಸಮುದ್ರ ತೀರದಲ್ಲಿ ಬುಧವಾರ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಬೃಹತ್ ಗಾತ್ರದ ಸಮುದ್ರದಲೆಗಳು ತೀರಕ್ಕೆ ಬಡಿಯುತಿದ್ದು, ಇದರಿಂದ ಕಡೆಲ್ಕೊರೆತ ತಡೆಯಲು ಹಾಕಲಾದ ಬನಹದಾಕಾರದ ಕಲ್ಲುಗಳು ಕಡಲ ಒಡಲು ಸೇರುತ್ತಿವೆ. ಈಗಾಗಲೇ ಕೆಲವು ತೆಂಗಿನ ಮರಗಳು ಕಡಲು ಒಡಲು ಸೇರಿವೆ. ಕೂಡಲೇ ಶಾಶ್ವತ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಸರಕಾರವನ್ನು ಒತ್ತಾಯಿಸಿದ್ದಾರೆ.
Next Story