ಪಿಲ್ಯ: ಯುವತಿ, ವಿವಾಹಿತ ನಾಪತ್ತೆ
ಬೆಳ್ತಂಗಡಿ, ಆ. 9: ಇಲ್ಲಿಯ ಪಿಲ್ಯ ಗ್ರಾಮದ ಬದ್ರಿಯಾ ನಗರ ನಿವಾಸಿ ಅಬ್ದುಲ್ ಸಲಾಂ (30) ನಾಪತ್ತೆಯಾಗಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾರಿಯಲ್ಲಿ ಲೋಡ್, ಅನ್ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ಅವರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಸಲಾಂ ನಾಪತ್ತೆಯಾದ ದಿನವೇ ನೆರೆಮನೆಯ 23 ವರ್ಷ ಪ್ರಾಯದ ಯುವತಿಯು ನಾಪತ್ತೆಯಾಗಿದ್ದು, ಇವರಿಬ್ಬರೂ ಜೊತೆಯಾಗಿಯೇ ಹೋಗಿರಬಹುದೆಂಬ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.
ಅವರಿಬ್ಬರ ಫೋನ್ ಸ್ವಿಚ್ ಆಫ್ ಆಗಿದ್ದು ಇಬ್ಬರೂ ಜೊತೆಯಾಗಿಯೇ ಇರಬಹುದೆಂದು ಭಾವಿಸಲಾಗಿದೆ. ಪತ್ನಿ ಸಫಿಯಾ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story