ಕೋಳಿ ಅಂಕ ಹಾಗೂ ಅಕ್ರಮ ಮದ್ಯ ಮಾರಾಟ :ಪೊಲೀಸರಿಂದ ದಾಳಿ
ಬೆಳ್ತಂಗಡಿ,ಆ.12: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದಲ್ಲಿ ಶಾಮಿಯಾನ ಹಾಕಿ ನಡೆಸುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ದ.ಕ. ಪೋಲಿಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೋಲಿಸರ ತಂಡ ಶನಿವಾರ ಸಂಜೆ ದಾಳಿ ನಡೆಸಿದೆ.
ಮೂರು ದಿನಗಳಿಂದ ನಡೆಯುತ್ತಿತ್ತು ಎನ್ನಲಾಗಿದ್ದ ಬೃಹತ್ ಅಕ್ರಮ ಕೋಳಿ ಅಂಕಕ್ಕೆ ಎಸ್ಪಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದು, 15 ಕ್ಕೂ ಹೆಚ್ಚು ಕೋಳಿ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ - ಐವರು ವಶಕ್ಕೆ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಕೋಳಿ ಅಂಗಡಿ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ಬಂಟ್ವಾಳ ಎಎಸ್ಪಿ ಡಾ| ಅರುಣ್ ಕುಮಾರ್ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಮರಾಟಕ್ಕೆ ತಂದಿಟ್ಟಿದ್ದ ಎರಡು ಬಾಕ್ಸ್ ಮದ್ಯ ವಶ ಪಡಿಸಿಕೊಂಡಿದ್ದಾರೆ.
Next Story