ಅಡ್ಡೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೀಝನ್ 3 ಪ್ರೊ ಕಬಡ್ಡಿ ಪಂದ್ಯಾಟ
► ಅಡ್ಡೂರು ಬುಲ್ಸ್ ತಂಡ ಪ್ರಥಮ, ► ಡಿ.ಗೈಸ್ ದ್ವಿತೀಯ
ಅಡ್ಡೂರು, ಆ.16 : ಇಲ್ಲಿನ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 'ಫೈವ್ ಸ್ಟಾರ್ ಅಡ್ಡೂರು' ಹಾಗೂ ಶಾಲಾ ಹಿತರಕ್ಷಣ ಸಮಿತಿ ಅಡ್ಡೂರು ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸೀಝನ್ 3 ಪ್ರೊ ಕಬಡ್ಡಿ ಪಂದ್ಯಾಟ ನಡೆಯಿತು.
ಈ ವೇಳೆ ಪಂದ್ಯಾಕೂಟದಲ್ಲಿ 8 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನ ಅಡ್ಡೂರು ಬುಲ್ಸ್ ತಂಡ ಗಳಿಸಿದರೆ ದ್ವಿತೀಯ ಸ್ಥಾನ ರಿಯಾಝ್ ಎನ್.ಎಂ ನೇತೃತ್ವದ ಡಿ.ಗೈಸ್ ತಂಡ ಪಡೆದುಕೊಂಡಿತು.
Next Story