ಕಾರು ಢಿಕ್ಕಿ - ಮಹಿಳೆಗೆ ಗಾಯ
ಪುತ್ತೂರು, ಸೆ. 19: ಮಹಿಳೆಯೊಬ್ಬರಿಗೆ ಮಾರುತಿ ಕಾರೊಂದು ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಪುತ್ತೂರು ನಗರದ ದರ್ಬೆಯಲ್ಲಿ ಸಂಭವಿಸಿದೆ.
ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಸಮೀಪದ ಗೋಳಿಕಟ್ಟೆ ನಿವಾಸಿ ಅಸೋಕ್ ಬಿ.ಕೆ ಎಂಬವರ ಪತ್ನಿ ನೈನಾ ಗಾಯಾಳು.
ನೈನಾರವರು ದರ್ಬೆ ಸಮೀಪ ನಡೆದು ಕೊಂಡು ಹೋಗುತ್ತಿದ್ದ ಮಾರುತಿ ಕಾರೊಂದು ಅವರಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ನೈನಾ ಗಾಯಗೊಂಡು ಇಲ್ಲಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story