ಎಐಸಿಎಸ್ ಜಿಲ್ಲಾಮಟ್ಟದ ಫುಟ್ಬಾಲ್: ಅಲ್ ಫುರ್ಖಾನ್ ಮೂಡುಬಿದಿರೆ ತಂಡ ರನ್ನರ್ಸ್
ಮೂಡುಬಿದಿರೆ, ಅ. 18: ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ ಶಿರೂರು ಆಯೋಜಿಸಿದ ಅಸೋಸಿಯೇಶನ್ ಆಫ್ ಸಿಬಿಎಸ್ಇ ಹಾಗೂ ಐಸಿಎಸ್ಇ ಇದರ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯು ಸತತ ಎರಡನೇ ಬಾರಿ ರನ್ನರ್ಸ್ ಅಫ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪಂದ್ಯಾಟದಲ್ಲಿ ಅತೀ ಹೆಚ್ಚು ಗೋಲು ಭಾರಿಸಿದ ಮುಯೀದುರ್ರಹ್ಮಾನ್ ಗೋಲ್ಡನ್ ಬೂಟ್ ಹಾಗೂ ಬೆಸ್ಟ್ ಫಾರ್ವಾಡ್ ಆಟಗಾರ ಪ್ರಶಸ್ತಿಯನ್ನು ತಂಡದ ಆಟಗಾರ ಅಹ್ಮದ್ ಅಝರ್ ವೈಯುಕ್ತಿಕ ಪ್ರಶಸ್ತಿಗೆ ಪಾತ್ರರಾದರು.
ಪಂದ್ಯಾಟದಲ್ಲಿ ಎಸ್.ಡಿ.ಎಂ ಉಜಿರೆ ತಂಡವನ್ನು 2-0, ಮೌಂಟ್ ಕಾರ್ಮೆಲ್ ಮಂಗಳೂರು ತಂಡವನ್ನು 4-1, ಹಾಗೂ ಸೆಮಿಫೈನಲ್ ಪಂದ್ಯಾಟದಲ್ಲಿ ಸೈಂಟ್ ಮೇರೀಸ್ ಉಡುಪಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಫೈನಲ್ಗೇರಿತ್ತು.
ತಂಡದ ಟೀಮ್ ಮ್ಯಾನೇಜರ್ ಅಕೀಬ್ ಜಾವೆದ್ ಎಮ್ ಹಾಗೂ ದೈಹಿಕ ಶಿಕ್ಷಕರಾದ ಉಬೈದುಲ್ಲಾ ಖಾನ್, ಕೋಚ್ಗಳಾದ ಅಬ್ದುಲ್ಲಾ ಹಾಗೂ ಸುಬಾತ್ ತಂಡವನ್ನು ಮುನ್ನಡೆಸಿದ್ದರು. ವಿಜೇತ ತಂಡವನ್ನು ಸಂಸ್ಥೆಯ ಚೇಯರ್ ಮ್ಯಾನ್ ಮೊಯ್ದಿನ್ ಕುಂಞಿ, ನಿರ್ದೇಶಕಿ ಮುಮ್ತಾಝ್, ಪ್ರಾಂಶುಪಾಲೆ ನಝ್ರಾನ, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ ಅಭಿನಂದಿಸಿದ್ದಾರೆ.