ಗಾಂಜಾ ಮಾರಾಟ : ಆರೋಪಿಯ ಬಂಧನ
ಮುಂಡಗೋಡ,ನ.23; ಖಚಿತ ಮಾಹಿತಿ ಪಡೆದ ಪೊಲೀಸರು ಆಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂದಿಸಿದ ಘಟನೆ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಹುಬ್ಬಳ್ಳಿ-ಶಿರಸಿ ರಸ್ತೆಯ ನಡೆದಿದೆ.
ಬಂದಿತ ವ್ಯಕ್ತಿಯನ್ನು ತಾಲೂಕಿನ ರಾಮಾಪೂರ ಗ್ರಾಮದ ಫಕೀರಪ್ಪ ಹನ್ಮಂತಪ್ಪ ಭೋವಿವಡ್ಡರ ಎಂದು ತಿಳಿದು ಬಂದಿದೆ. ಆರೋಪಿಯು ರಾಮಾಪುರದಿಂದ ಗಾಂಜಾ ತಂದು ಕರಗಿನಕೊಪ್ಪ ಬಳಿ ಮಾರುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನಿಂದ 346 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story