ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿದೇಶಿ ಜೋಡಿ
ಮೈಸೂರು,ಜ.6: ಹೆಚ್ಚಿನ ಸಂಖ್ಯೆಯ ವಿದೇಶಿಯರು ಇತ್ತೀಚೆಗೆ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇಲ್ಲಿಯ ಸಂಸ್ಕೃತಿ ಸಂಪ್ರದಾಯಗಳಂತೆ ವಿವಾಹವನ್ನು ನೇರವೇರಿಸಿಕೊಳ್ಳುತ್ತಿದ್ದಾರೆ.
ಮೈಸೂರಿನ ಜೆ.ಪಿ ನಗರದಲ್ಲಿರುವ ಒಡನಾಡಿ ಸ್ವಯಂ ಸೇವಾಸಂಸ್ಥೆಯಲ್ಲಿ ಸರಳ ವಿವಾಹದ ಮೂಲಕ ವಿದೇಶಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಬ್ರಿಟನ್ ದೇಶದ ಫ್ರಿತಾ ವಿನ್ಸೆಂಟ್ ಮತ್ತು ಓಲಾಫ್ ಮೇಸನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕಂಪನಿಯೊಂದರ ಒಡತಿಯಾಗಿರುವ ಫ್ರಿತಾ ವಿನ್ಸೆಂಟ್, ಓಲಾಫ್ ಮೇಸನ್ ಅವರನ್ನು ಕಳೆದ ಹತ್ತು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ದಕ್ಷಿಣ ಭಾರತದಲ್ಲಿ ಬುಡಕಟ್ಟು ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಫ್ರಿತಾ ವಿನ್ಸೆಂಟ್ ತನ್ನ ಕಂಪನಿಯಿಂದ ಬರುವ ಲಾಭಾಂಶವನ್ನು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ. ಅವರ ವಿವಾಹ ಮಹೋತ್ಸವಕ್ಕೆ ಹಲವರು ಸಾಕ್ಷಿಯಾದರು.
Next Story