ಕೆಕ್ಕನಹಳ್ಳ ಬಳಿ ಹುಲಿ ಪ್ರತ್ಯಕ್ಷ!
ಗುಂಡ್ಲುಪೇಟೆ,ಜ.6: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕೆಕ್ಕನಹಳ್ಳ ಬಳಿ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಲಿಯೊಂದು ಪ್ರತ್ಯಕ್ಷಗೊಂಡು ಜನರನ್ನು ಆತಂಕಕ್ಕೆ ತಳ್ಳಿದೆ. ಇತ್ತೀಚಿಗೆ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಕುಟುಂಬಗಳ ಸಮೇತವಾಗಿ ಪ್ರವಾಸಿಗರಿಗೆ ಕಾಣ ಸಿಗುತ್ತಿದ್ದು, ಇದೀಗ ರಸ್ತೆ ದಾಟುತ್ತಿರುವ ಹುಲಿಯು ತನ್ನ ಆವಾಸ ಸ್ಥಾನದ ಬಗ್ಗೆ ಧೃಡಪಡಿಸುತ್ತಿರುವಂತಿದೆ.
ಬಂಡೀಪುರದಲ್ಲಿ ಹುಲಿಗಣತಿಗೆ ಕ್ಷಣಗಣನೆ ಪ್ರಾರಂಭವಾಗುವ ಮುನ್ನಾ ದಿನ ರಸ್ತೆಯಲ್ಲಿಯೇ ಹುಲಿ ಸಾಗುತ್ತಿರುವುದು ಅರಣ್ಯ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.
Next Story