ಬಾಗೇಪಲ್ಲಿ: ಕಂಪ್ರೈಸರ್ ಸ್ಪೋಟಗೊಂಡು ಶಾಪ್ ಮಾಲಿಕ ಮೃತ್ಯು
ಬಾಗೇಪಲ್ಲಿ,ಫೆ.04: ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದ ಬಳಿ ಮೆಕ್ಯಾನಿಕ್ ಶಾಪ್ನಲ್ಲಿ ಕಂಪ್ರೈಸರ್ ಸ್ಪೋಟಗೊಂಡು ಶಾಪ್ನ ಮಾಲಿಕ ಜಿಲಾನಿ(30) ಮೃತಪಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ಶಾಪ್ನ ಬಾಗಿಲುನ್ನು ತೆರೆದು ಕಂಪ್ರೈಸರ್ಗೆ ವಿದ್ಯುತ್ ಸಂಪರ್ಕ ನೀಡಿ ಶಾಪನ್ನು ಶುಚಿಗೊಳಿಸುತ್ತಿದ್ದಾಗ ಹಠಾತ್ನೆ ಸ್ಪೋಟಗೊಂಡಿದೆ. ಈ ಸ್ಫೋಟಕ್ಕೆ ಶಾಪ್ನ ಕಬ್ಬಿಣದ ತಗುಡುಗಳು ಕಿತ್ತು ಬಂದಿದ್ದು, ಮಾಲಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story