ಗಮನ ಸೆಳೆದ ಗಣ್ಯರ ಕ್ಷೇತ್ರಗಳ ಫಲಿತಾಂಶ: ಶಿಕಾರಿಪುರ
ಕರ್ನಾಟಕ ವಿಧಾನಸಭಾ ಚುನಾವಣೆ
ಶಿಕಾರಿಪುರ,ಮೇ.15: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಶಿಕಾರಿಪುರ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯೆಂದೇ ಬಿಂಬಿತವಾಗಿದ್ದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ 86983 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೋಣಿ ಮಾಲತೇಶ್ (51586 ಮತ) ವಿರುದ್ಧ ಅವರು 35397 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜೆಡಿಎಸ್ ನ ಹೆಚ್.ಟಿ ಬಳೆಗಾರ್ 13191 ಮತಗಳನ್ನು ಪಡೆದಿದ್ದಾರೆ.
Next Story