ಮಂಡ್ಯ: ರಸ್ತೆ ಅಪಘಾತ; ಬೈಕ್ ಹಿಂಬದಿ ಸವಾರ ಮೃತ್ಯು
ಮಂಡ್ಯ, ಮೇ 19: ಬೈಕ್ ಸ್ಕಿಡ್ ಆಗಿ ಬಿದ್ದು ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಪಾಂಡವಪುರ ತಾಲೂಕಿನ ದೇವೇಗೌಡನಕೊಪ್ಪಲು ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಚಿಕ್ಕಮರಳಿ ಗ್ರಾಮದ ದೊಡ್ಡಚನ್ನೇಗೌಡ(58) ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ನಂದೀಶ್ ಎಂಬುವರ ಬೈಕ್ನಲ್ಲಿ ದೊಡ್ಡಚನ್ನೇಗೌಡ ಪಾಂಡವಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story