ಯಾವ ಬಾಲ್ ಹಾಕಿದರೂ ಬ್ಯಾಟ್ ಮಾಡುತ್ತೇನೆ : ಯುಟಿ ಖಾದರ್
ಬೆಂಗಳೂರು, ಜೂ.6: ಯಾವ ಬಾಲ್ ಹಾಕಿದರೂ ಬ್ಯಾಟ್ ಮಾಡುತ್ತೇನೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಯು.ಟಿ.ಖಾದರ್ ಅವರನ್ನು ಬೆಂಗಳೂರಿನಲ್ಲಿ ಸುದ್ದಿಗಾರರು ಭೇಟಿಯಾಗಿ ನಿಮಗೆ ಯಾವ ಖಾತೆ ಸಿಗಬಹುದೆಂದು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.
ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಎಂದು ಹೇಳಿದ ಯುಟಿ ಖಾದರ್ ತಮಗೆ ಯಾವ ಖಾತೆ ಸಿಗಬಹುದೆಂಬ ಗುಟ್ಟನ್ನು ಬಿಟ್ಟು ಕೊಡಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಚಿವ ಸಚಿವ ಸಂಪುಟದಲ್ಲಿ ಯುಟಿ ಖಾದರ್ ಆರೋಗ್ಯ, ಆಹಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
Next Story