ಸುಂಟಿಕೊಪ್ಪ: ಹೋಂ ಸ್ಟೇ ಮೇಲೆ ಉರುಳಿ ಬಿದ್ದ ಮರ; ಲಕ್ಷಾಂತರ ರೂ. ನಷ್ಟ
ಸುಂಟಿಕೊಪ್ಪ,ಜೂ.10: ಕೆದಕಲ್ ಸಮೀಪದ ಭದ್ರಕಾಳಿ ದೇವಸ್ಥಾನ ಸಮೀಪವಿರುವ ಹೋಂಸ್ಟೆಗೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕೆದಕಲ್ ಗ್ರಾಮದ ಭದ್ರಕಾಳಿ ದೇವಸ್ಥಾನದ ಸಮೀಪವಿರುವ ಪ್ರಮೋದ್ ಎಂಬವರಿಗೆ ಸೇರಿದ ಜಮ್ಮಾಬಾಣೆ ಹೋಂಸ್ಟೆ ಮೇಲೆ ದೈತ್ಯ ಗಾತ್ರದ ಮರವು ಉರುಳಿ ಬಿದ್ದಿದ್ದು, ಗಾಳಿ ಮಳೆಯ ರಭಸಕ್ಕೆ ಬುಡಸಮೇತ ಉರುಳಿದ್ದ ಹಿನ್ನಲೆಯಲ್ಲಿ ಹೋಂಸ್ಟೆಯ ಮೇಲ್ಚಾವಣಿ ಹಾಗೂ ಯಂತ್ರೋಪಕರಣಗಳು ಸೇರಿದಂತೆ ಗೃಹ ಉಪಯೋಗಿ ವಸ್ತುಗಳು ಸಂಪೂರ್ಣ ಧ್ವಂಸಗೊಂಡಿದ್ದು, ಇದರಿಂದ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
Next Story