ಮಂಡ್ಯ: ಇಬ್ಬರು ಸರಗಳ್ಳರ ಬಂಧನ
ಮಂಡ್ಯ, ಜೂ.19: ಇಲ್ಲಿನ ಸುಭಾಷ್ ನಗರ 5ನೇ ಕ್ರಾಸ್ನಲ್ಲಿ ಜೂನ್ 11 ರಂದು ಬೆಳಗ್ಗೆ 10 ಗಂಟೆಗೆ ಕೆ.ಶೃತಿ ಎಂಬುವವರು ಮೊಬೈಲ್ ಪೋನ್ನಲ್ಲಿ ಮಾತನಾಡಿಕೊಂಡು ನಡೆದುಕೊಂಡು ಹೋಗುತ್ತಿರುವಾಗ ಅವರ ಕತ್ತಿನಲ್ಲಿದ್ದ 10 ಗ್ರಾಂ.ತೂಕದ ಚಿನ್ನದ ಸರ ಹಾಗೂ ಅವರ ಕೈಯಲ್ಲಿದ್ದ 36 ಸಾವಿರ ರೂಪಾಯಿ ಬೆಲೆ ಬಾಳುವ ಐ-ಪೋನ್-6 ಎಸ್ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಗೌತಮ್ ಬಡಾವಣೆಯ ಎಲ್.ಕುಮಾರ್ ಹಾಗೂ ಯತ್ತಗದಹಳ್ಳಿ ರಸ್ತೆ ವಿವಿ ಬಡಾವಣೆಯ ಮೀರ್ ಸನ್ನನ್ ಬಂಧಿತರು. ಇವರಿಂದ 36 ಸಾವಿರ ರೂಪಾಯಿ ಬೆಲೆ ಬಾಳು ಐ-ಪೋನ್-6 ಎಸ್ ಆ್ಯಪಲ್ ಮೊಬೈಲ್ ಹ್ಯಾಂಡ್ ಸೆಟ್ನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.
Next Story