ಗುಂಡ್ಲುಪೇಟೆ: ಎರಡು ಬೈಕುಗಳ ಮುಖಾಮುಖಿ ಢಿಕ್ಕಿ; ಇಬ್ಬರು ಸವಾರರು ಮೃತ್ಯು
ಮಹದೇವು, ಶಿವು
ಗುಂಡ್ಲುಪೇಟೆ,ಜೂ.22: ತಾಲೂಕಿನ ಮಡಹಳ್ಳಿ ತೆಂಕಲಹುಂಡಿ ಸಮೀಪದಲ್ಲಿ ಎರಡು ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟು ಘಟನೆ ನಡೆದಿದೆ.
ತೆಂಕಲಹುಂಡಿ ಗ್ರಾಮದ ಶಿವು ತನ್ನ ಸ್ನೇಹಿತರಾದ ಸಚಿನ್ ಹಾಗೂ ರಮೇಶ್ ಎಂಬುವರೊಡನೆ ಬೈಕಿನಲ್ಲಿ ಗ್ರಾಮದತ್ತ ತೆರಳುತ್ತಿದ್ದಾಗ ಎದುರಿನಿಂದ ಇನ್ನೊಂದು ಬೈಕಿನಲ್ಲಿ ಬರುತ್ತಿದ್ದ ಪಟ್ಟಣದ ಪೇಂಟರ್ ಮಹದೇವು ಎಂಬುವರಿಗೆ ಢಿಕ್ಕಿಯಾಗಿದೆ.
ಘಟನೆಯಲ್ಲಿ ಎರಡೂ ಬೈಕುಗಳ ಸವಾರರಾದ ಶಿವು(20) ಹಾಗೂ ಮಹದೇವು (250 ಸ್ಥಳದಲ್ಲಿಯೇ ಮೃತಪಟ್ಟರೆ, ಸಚಿನ್ ಹಾಗೂ ರಮೇಶ್ ಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, ನಂತರ ವಾರಸುದಾರರಿಗೆ ನೀಡಿದರು.
ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story