ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ; ಪುಸ್ತಕ ಭಂಡಾರ ಸುಟ್ಟುಭಸ್ಮ
ಕೋಲಾರ,ಆ.21: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರ ವಾಸದ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಗೆ ಪುಸ್ತಕ ಭಂಡಾರ ಸುಟ್ಟು ಬೂದಿಯಾದ ಘಟನೆ ಶತಶೃಂಗ ಪರ್ವತ ಶ್ರೇಣಿಯ ಪಾಪರಾಜನಹಳ್ಳಿಯಲ್ಲಿ ನಡೆದಿದೆ.
ಇಂದು ಮದ್ಯಾಹ್ನ ರಾಮಯ್ಯರನವರ ತಾಯಿ ಮನೆಯಲ್ಲಿ ಇದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳು, ಟಿ.ವಿ. ಕಂಪ್ಯೂಟರ್, ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಮನೆಯಿಂದ ಹೊರಗಡೆ ಬಂದ ರಾಮಯ್ಯರ ತಾಯಿ ಚಿನ್ನಮ್ಮ ಸಹಾಯ ಕೋರಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿ ಇದ್ದವರು ಅಲ್ಲೇ ಇದ್ದ ಬಾವಿಯಿಂದ ನೀರು ತೆಗೆದು ಬೆಂಕಿ ನಂದಿಸಿದ್ದಾರೆ.
Next Story