ನಿರಾಶ್ರಿತ ಶಿಬಿರದಲ್ಲೇ ದಿನ ದೂಡುತ್ತಿರುವ ನೂರಾರು ಮಂದಿ

ಜೋಡುಪಾಲ ದುರಂತ: ಸಂತ್ರಸ್ತರ ಬದುಕು ಇನ್ನೂ ಅತಂತ್ರ

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

ಮಡಿಕೇರಿ, ಆ.24: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮದೆ, ಕಟ್ಟೆಮಾಡು, ಕಾಯಮೊಗರು ಸಹಿತ ಸುತ್ತಮುತ್ತಲಿನ ಗ್ರಾಮಗಳ ನೂರಾರು ನಿರಾಶ್ರಿತರು ಇನ್ನೂ ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಈ ಗ್ರಾಮಗಳ ನಿರಾಶ್ರಿತರಿಗೆ ಸುಳ್ಯ ತಾಲೂಕಿನ ತೆಕ್ಕಿಲ್ ಸಮುದಾಯ ಭವನ, ಸಂಪಾಜೆ ಮತ್ತು ದೇವರಕೊಲ್ಲಿ ಸರಕಾರಿ ಶಾಲೆಗಳಲ್ಲಿ ಶಿಬಿರಗಳನ್ನು ತೆರೆಯಲಾಗಿದೆ. ತೆಕ್ಕಿಲ್ ಸಮುದಾಯ ಭವನ ಮತ್ತು ಸಂಪಾಜೆ ಶಿಬಿರದಲ್ಲಿ 198 ಕುಟುಂಬಗಳ 760 ಮಂದಿ ಆಶ್ರಯ ಪಡೆದಿದ್ದರು. ಅವುಗಳಲ್ಲಿ ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದರೆ ಮದೆ, ಕಟ್ಟೆಮಾಡು, ಕಾಯಮೊಗರು ಸಹಿತ ಸುತ್ತ ಮುತ್ತಲಿನ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ ತೀವ್ರ ಹಾನಿ ಸಂಭವಿಸಿರುವ ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮದ ಬಹುತೇಕ ಮಂದಿ ಇನ್ನೂ ಶಿಬಿರದಲ್ಲೇ ಇದ್ದಾರೆ. ಅದೇರೀತಿ ದೇರಿ ದೇವರಕೊಲ್ಲಿ ಸರಕಾರಿ ಶಾಲೆಯ ಶಿಬಿರದಲ್ಲೂ ಹತ್ತಾರು ಕುಟುಂಬದ ಹಲವು ಮಂದಿ ಆಶ್ರಯ ಪಡೆದಿದ್ದಾರೆ. 

ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ತೀವ್ರ ಹಾನಿಯಾಗಿರುವುದರಿಂದ ಈ ಎರಡು ಗ್ರಾಮಗಳು ಇನ್ನೂ ಹೊರಗಿನ ಸಂಪರ್ಕವನ್ನು ಕಳೆದುಕೊಂಡಿದೆ. ಗ್ರಾಮಕ್ಕೆ ತೆರಳುವ ರಸ್ತೆಗಳು, ಕಾಲುದಾರಿಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಅಲ್ಲದೆ ಹೆಚ್ಚಿನ ಗ್ರಾಮಸ್ಥರ ಮನೆ, ಜಮೀನುಗಳು ಹಾನಿಯಾಗಿವೆ. ಈ ಎರಡು ಗ್ರಾಮಗಳ ಜನರನ್ನು ಹೊರೆತುಪಡಿಸಿ ಉಳಿದ ಗ್ರಾಮಸ್ಥರು ತಮ್ಮ ಮನೆಗಳ ಪರಿಸ್ಥಿತಿಯನ್ನು ಅರಿತು ಮನೆಗಳಿಗೆ ತೆರಳಲು ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ತಂಡ ಪರಿಶೀಲಿಸಿದ ಬಳಿಕ ಈ ಗ್ರಾಮದಲ್ಲಿ ವಾಸಿಸಲು ಯಾವುದೇ ಅಪಾಯವಿಲ್ಲ ಎಂದು ಮನದಟ್ಟಾದ ಬಳಿಕವಷ್ಟೇ ಜನರನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದು ಕಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿರಾಶ್ರಿತರ ಶಿಬಿರದಲ್ಲಿ ಎಲ್ಲ ವ್ಯವಸ್ಥೆ ಇದ್ದರೂ ಮನೆ, ಜಮೀನನ್ನು ಕಳೆದುಕೊಂಡಿರುವ ಜೋಡುಪಾಲ ಮತ್ತು ಮೊಣ್ಣಂಗೇರಿ ಗ್ರಾಮಸ್ಥರ ಬದುಕು ಇನ್ನೂ ಅತಂತ್ರವಾಗಿದೆ. ನಿರಾಶ್ರಿತ ಶಿಬಿರದಲ್ಲಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಗ್ರಾಮಕ್ಕೆ ತೆರಳುವ ಎಂದರೆ ವಾಸಿಸಲು ಮನೆಯೂ ಇಲ್ಲವಾಗಿದೆ. ಎಲ್ಲದಕ್ಕೂ ಮಿಗಿಲಾಗಿ ಊರಿಗೆ ಹೋಗಲು ರಸ್ತೆಯೆ ಇಲ್ಲವಾಗಿದೆ. ನಮ್ಮ ಬದುಕು ಅತಂತ್ರವಾಗಿದೆ. ನಮಗೆ ನೆಲೆ ಕಲ್ಪಿಸಲು ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ತಿಳಿದಿಲ್ಲ. ಸಂಘ ಸಂಸ್ಥೆಗಳು, ರಾಜಕಾರಣಿಗಳು, ಅಧಿಕಾರಿಗಳು ಬಂದು ಸಾಂತ್ವನ, ಭರವಸೆ ನೀಡಿ ಹೋಗುತ್ತಿದ್ದಾರೆ. 8 ದಿನ ಕಳೆದರೂ ನಾವು ಇಲ್ಲೇ ಉಳಿದುಕೊಂಡಿದ್ದೇವೆ ಎಂದು ಜೋಡುಪಾಲ ಗ್ರಾಮದ ಕೃಷ್ಣಪ್ಪ ಎಂಬವರು ತಿಳಿಸಿದ್ದಾರೆ.


ಮಡಿಕೇರಿ ತಾಲೂಕಿನ ಜೋಡುಪಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರಿಗೆ ಸುಳ್ಯ ತಾಲೂಕಿನ ಮೂರು ಕಡೆ ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದೆ. ಈ ಶಿಬಿರಗಳಲ್ಲಿರುವ ಎಲ್ಲರ ಆರೋಗ್ಯದ ದೃಷ್ಟಿಯಿಂದ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧಗಳು ಲಭ್ಯವಿವೆ. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿದೆ. ಎಲ್ಲರಿಗೂ ಬಾಟಲ್ ನೀರಿನೊಂದಿಗೆ ಬಿಸಿ ನೀರನ್ನು ನೀಡಲಾಗುತ್ತಿದೆ. ಸ್ನಾನಕ್ಕೂ ಬಿಸಿ ನೀರು ನೀಡಲಾಗುತ್ತಿದೆ. ನಿರಾಶ್ರಿತರಿಗೆ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳ ನೆರವು ಅಪಾರವಾಗಿದೆ. 

- ಡಾ.ಸುಬ್ರಹ್ಮಣ್ಯ,

ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ


ಶಿಬಿರಕ್ಕೆ ದಾನಿಗಳಿಂದ ಅಪಾರ ನೆರವು ಬರುತ್ತಿದೆ. ಆಹಾರ ಸಾಮಗ್ರಿಗಳು, ಬಟ್ಟೆಬರೆಗಳು, ಚಪ್ಪಲಿಗಳು, ಔಷಧಗಳು ಸಹಿತ ಅಗತ್ಯವಾದ ಎಲ್ಲಾ ಸಾಮಗ್ರಿಗಳು ಬಂದಿವೆ. ಸಂಘ ಸಂಸ್ಥೆಗಳಿಂದ ಬಾರದ ನೆರವು ಸಾಮಗ್ರಿಗಳನ್ನು ಜಿಲ್ಲಾಡಳಿತ ಪೂರೈಸುತ್ತಿದೆ. ಆದ್ದರಿಂದ ಶಿಬಿರದಲ್ಲಿ ನಿರಾಶ್ರಿತರಿಗೆ ಯಾವುದೇ ಕೊರತೆ ಇಲ್ಲ. ಆದರೆ ಶಿಬಿರಕ್ಕೆ ಹಲವು ಸಂಘ ಸಂಸ್ಥೆಗಳು ಕಳುಹಿಸಿದ ವಸ್ತುಗಳನ್ನೇ ಮತ್ತೆಮತ್ತೆ ಕಳುಹಿಸುವುದರಿಂದ ಅವುಗಳು ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ನೆರವು ನೀಡುವವರು ಶಿಬಿರದಲ್ಲಿರುವ ಉಸ್ತುವಾರಿಗಳನ್ನು ಸಂಪರ್ಕಿಸಿ ಅಗತ್ಯ ಇರುವ ವಸ್ತುಗಳನ್ನು ಕಳುಹಿಸಿದರೆ ಸೂಕ್ತ ಎನಿಸುತ್ತಿದೆ.

- ಕೆ.ಪಿ.ಜಗದೀಶ್,

ಸಂಪಾಜೆ ಶಿಬಿರದಲ್ಲಿ ಸೇವಕರಾಗಿರುವ ನಿವೃತ್ತ ಸೈನಿಕ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top