ಬಳ್ಳಾವರ ಸೈಂಟ್ ಆನ್ಸ್ ಶಾಲೆಗೆ ಸಮಗ್ರ ಪ್ರಶಸ್ತಿ
ಲಿಂಗದಹಳ್ಳಿ,ಆ.27: ತಣಿಗೆಬೈಲಿನಲ್ಲಿ ನಡೆದ ಬಳ್ಳಾವರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ ಬಳ್ಳಾವರದ ಸೈಂಟ್ ಆನ್ಸ್ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಾಲಕರ ವಿಭಾಗ: ವಾಲಿಬಾಲ್, ಕೋಕೋ , ಕಬ್ಬಡ್ಡಿ, ರಿಲೇ ಪ್ರಥಮ, ಥ್ರೋಬಾಲ್ : ದ್ವಿತೀಯ
ಬಾಲಕಿರಯ ವಿಭಾಗ: ವಾಲಿಬಾಲ್, ಕೋಕೋ, ಥ್ರೋಬಾಲ್ ಪ್ರಥಮ, ಕಬ್ಬಡ್ಡಿ ಹಾಗೂ ರಿಲೇ ದ್ವಿತೀಯ ಸ್ಥಾನ. ಅಥ್ಲೇಟಿಕ್ಸ್ ವಿಭಾಗದಲ್ಲಿ ಶೇಕಡ 60 ಕ್ಕೂ ಹೆಚ್ಚು ಪ್ರಶಸ್ತಿಗಳು ಸೈಂಟ್ ಆನ್ಸ್ ಶಾಲೆಗೆ ಬಂದಿದೆ.
ಸಮಗ್ರ ಪ್ರಶಸ್ತಿಗೆ ಬರಲು ಕಾರಣಕರ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಸುನೀಲ್ ನಾಯ್ಕ ಹಾಗೂ ಶಾಲೆಯ ಪ್ರಾಂಶುಪಾಲ ಸಿಸ್ಟರ್ ಇಂದಿರಾ, ಶಾಲಾ ಶಿಕ್ಷಕ ವರ್ಗಕ್ಕೆ ಆಡಳಿತ ಮಂಡಳಿ, ಹಾಗೂ ಮಕ್ಕಳ ಪೋಷಕರು ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Next Story