ಹನೂರು: ರೋಟರಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹನೂರು,ಸೆ.3: ತಾಲೂಕಿನ ಗಡಿಹಂಚಿನಲ್ಲಿರುವ ಜಲ್ಲಿಪಾಳ್ಯ ಗ್ರಾಮದಲ್ಲಿ ಹನೂರು ರೋಟರಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿಲಾಗಿತ್ತು
ಈ ತಪಾಸಣೆ ಶಿಬಿರವನ್ನು ಉದ್ದೇಶಿಸಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಿ .ಗಿರೀಶ್ ಮಾತನಾಡಿ, ಇಂದಿನ ಒತ್ತಡ ಬದುಕಿನಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿರುವ ನಿಟ್ಟಿನಲ್ಲಿ ಮತ್ತು ಆರೋಗ್ಯಯುತ ಸಮಾಜವನ್ನು ನಿರ್ಮಾಣಮಾಡುವ ದಿಸೆಯಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಗ್ರಾಮದ ಪ್ರತಿಯೊಬ್ಬರು ಪಡೆದುಕೂಳ್ಳಬೇಕೆಂದು ಸಲಹೆ ನೀಡಿದರು.
ಈ ಶಿಬಿರದಲ್ಲಿ ಮದುಮೇಹ, ರಕ್ತದೊತ್ತಡ, ಮೋಣಕಾಲು ನೋವು, ಚರ್ಮರೋಗ, ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಪ್ರಕಾಶ್ ತಪಾಸಣೆ ನಡೆಸಿದರು.
ರೋಟರಿ ಸಂಸ್ಥೆ ಪಧಾದಿಕಾರಿ ಮಾಕ್ಸಿಮ್ ಗೋವಿಯಸ್ ಮತ್ತು ಸದಸ್ಯ ರಾಜುಗೌಡ, ರಂಗಸ್ವಾಮಿ, ವಿನೋದ್ ಇನ್ನಿತರರು ಹಾಜರಿದ್ದರು.
Next Story