ಮೈಸೂರು: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಮೈಸೂರು,ಸೆ.21: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜೀವ್ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಗೌಸಿಯಾನಗರದ ನಿವಾಸಿ ಜಾವಿದ್ ಪಾಷಾ (21) ಎಂದು ಗುರುತಿಸಲಾಗಿದೆ. ಇವರು ರಾಜೀವ್ ನಗರದ ರಿಂಗ್ ರಸ್ತೆಯ ವಿಟಿಯು ಕಾಲೇಜು ಬಳಿ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಹಿಂಬದಿ ಸವಾರ ಸಯ್ಯದ್ ಸಲ್ಮಾನ್ ಗಾಯಗೊಂಡಿದ್ದಾರೆ. ಈ ಸಂಬಂಧ ಸಿದ್ದಾರ್ಥನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story