ಮೈಸೂರು: ಮದುವೆಯಾಗಲು ನಿರಾಕರಿಸಿದ ಪ್ರೇಯಸಿ; ಕೈ ಕುಯ್ದುಕೊಂಡ ಪ್ರೇಮಿ
ಮೈಸೂರು,ಅ.26: ಪ್ರೀತಿಸಿದ ಯುವತಿ ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಪ್ರೇಮಿಯೊಬ್ಬ ಕೈ ಕುಯ್ದುಕೊಂಡ ಘಟನೆ ಜೆ.ಪಿ.ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಕಾಂತಾ(28)ಎಂಬಾತ ರಮಾಬಾಯಿನಗರದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ನಿನ್ನೆ ಯಾವುದೋ ಕಾರಣಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಅದರಿಂದ ಬೇಸತ್ತ ಯುವತಿ ತಾನು ನಿನ್ನನ್ನು ವಿವಾಹವಾಗಲಾರೆ ಎಂದಿದ್ದಾಳೆ.
ಇದರಿಂದ ಮನನೊಂದ ಯುವಕ ಇಂದು ಜೆ.ಪಿ.ನಗರ ರಿಂಗ್ ರಸ್ತೆಯ ಬಳಿ ಕೈ ಕುಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story