ಮಂಡ್ಯ: ನಾಯಿಗಳ ದಾಳಿಗೆ 20 ಕುರಿಗಳು ಬಲಿ
ಮಂಡ್ಯ, ನ.9: ಬೀದಿನಾಯಿಗಳ ದಾಳಿಗೆ 20 ಕುರಿಗಳು ಬಲಿಯಾಗಿರುವ ಘಟನೆ ತಾಲೂಕಿನ ಕಟ್ಟೆದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಗ್ರಾಮದ ಚನ್ನೇಗೌಡ ಎಂಬವರಿಗೆ ಸೇರಿದ ಕುರಿಗಳನ್ನು ನಾಲ್ಕು ನಾಯಿಗಳು ಕೊಂದುಹಾಕಿದ್ದು, ಸುಮಾರು 2 ಲಕ್ಷ ರೂ. ನಷ್ಟವಾಗಿದೆ.
ಸಂಜೆ ಹೊಲದಲ್ಲಿ ಮೇಯಿಸಿಕೊಂಡ ಕುರಿಗಳನ್ನು ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕೂಡಿಹಾಕಿದ ಕೆಲವೇ ನಿಮಿಷಗಳಲ್ಲಿ ನಾಯಿಗಳು ದಾಳಿ ನಡೆಸಿದವು ಎನ್ನಲಾಗಿದೆ.
ಕುರಿಗಳನ್ನು ಸಾಕಿ ಜೀವನಸಾಗಿಸುತ್ತಿದ್ದ ಚನ್ನೇಗೌಡರ ಕುಟುಂಬ ಘಟನೆಯಿಂದ ಕಂಗಲಾಗಿದ್ದು, ಬೀದಿನಾಯಿಗಳ ನಿಯಂತ್ರಿಸುವಂತೆ ಗ್ರಾಪಂ ಆಡಳಿತವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Next Story