ಚಾಮರಾಜನಗರ: ಆಕಸ್ಮಿಕವಾಗಿ ಚಲಿಸಿದ ಕಾರು; ವೃದ್ದೆ ಮೃತ್ಯು
ಚಾಮರಾಜನಗರ,ನ.21: ಆಕಸ್ಮಿಕ ಕಾರು ಚಾಲನೆಯಾಗಿ ಸ್ಥಳದಲ್ಲೇ ವೃದ್ದೆಯೊಬ್ಬಳು ಸಾವನ್ನಪ್ಪಿದ್ದು, ಮತ್ತೊಬ್ಬರು ವೃದ್ದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಚಾಮರಾಜನಗರ ಸಮೀಪ ಜಾಲಹಳ್ಳಿ ಮೂಡ್ಲುಮೋಳೆಯಲ್ಲಿ ನಡೆದಿದೆ.
ನಗರ ಸಮೀಪದ ಜಾಲಹಳ್ಳಿ ಮೂಡ್ಲುಮೋಳೆಯಲ್ಲಿ ನಿನ್ನೆ ತಡರಾತ್ರಿ ಗಿರಿ ಎಂಬ ವ್ಯಕ್ತಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕುಳಿತಿರುವಾಗ ಆಕಸ್ಮಿಕವಾಗಿ ಗೇರ್ ಬಿದ್ದ ಪರಿಣಾಮ ಕಾರು ಚಲಿಸಿ ಮನೆಯ ಮೇಲೆ ಹರಿದ ಪರಿಣಾಮ ಲಕ್ಷ್ಮಮ್ಮ ಎಂಬ ವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ದುಂಡಮ್ಮರಿಗೆ ತೀವ್ರ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರಿ ಪೊಲೀಸ್ ಠಾಣೆ ಮತ್ತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story